Today: Last Update:

ಆಂಧ್ರದ ಗ್ರಾಮ ದತ್ತು ಪಡೆದ ಸಚಿನ್

Posted by Yeshwant

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಖ್ಯಾತ ಕ್ರಿಕೆಟಿಗ, ರಾಜ್ಯಸಭಾ ಸಂಸದ ಸಚಿನ್ ತೆಂಡೂಲ್ಕರ್ ಆಂಧ್ರ ಪ್ರದೇಶದ ಪುಟ್ಟಮರಾಜು ಖಂಡ್ರಿಗ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಸಚಿನ್ ಗ್ರಾಮಕ್ಕೆ ನಿರಂತರ ವಿದ್ಯುತ್ ಸಂಪರ್ಕ ಹಾಗೂ ವೈ-ಫೈ ಸೇವೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಶುದ್ಧ ಕುಡಿಯುವ ನೀರು, ಹೈಸ್ಕೂಲ್ ನಿರ್ಮಾಣ, ಮಹಿಳಾ ತರಬೇತಿ ಕೇಂದ್ರ, ಪಶು ವೈದ್ಯಾಲಯವನ್ನು ತೆರೆಯುವ ಭರವಸೆ ನೀಡಿದರು. ಇದಕ್ಕೆ ಪ್ರತಿಯಾಗಿ ಗ್ರಾಮಸ್ಥರು ಗ್ರಾಮವನ್ನು ತಂಬಾಕು ಹಾಗೂ ಮದ್ಯ ಮುಕ್ತ ಗ್ರಾಮವನ್ನಾಗಿಸುವುದಾಗಿ ಸಚಿನ್‍ಗೆ ಭರವಸೆ ನೀಡಿದ್ದಾರೆ. ಗ್ರಾಮ ದತ್ತು ಪಡೆದ ಬಳಿಕ ಮೊದಲ ಕಂತಿನಲ್ಲಿ 2.79 ಕೋಟಿ ರೂ. ವೆಚ್ಚದಲ್ಲಿ ವಸತಿ, ರಸ್ತೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮಾಡಲಿದ್ದಾರೆ. ಕೃಷ್ಣಪಟ್ಟಣಂ ಬಂದರಿಗೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ಸಚಿನ್ ಬಳಿಕ ರಸ್ತೆ ಮಾರ್ಗವಾಗಿ ಪುಟ್ಟಮರಾಜು ಖಂಡ್ರಿಗ ಗ್ರಾಮಕ್ಕೆ ಆಗಮಿಸಿದರು.

Tags: Sachin
Source: Public News

comments

    Be the first one to write a comment for this news.

leave a comment

The content of this field is kept private and will not be shown publicly.

(required)
(required)
A- A A+