Today: Last Update:

ಕರ್ನಾಟಕ ಸಂಸದರು ದತ್ತು ತೆಗೆದುಕೊಂಡ ಗ್ರಾಮಗಳು

Posted by Yeshwant

ಬೆಂಗಳೂರು: ಪ್ರಧಾನಿ ಮೋದಿ ಅಭಿವೃದ್ಧಿ, ಅಭಿವೃದ್ಧಿ ಎನ್ನುತ್ತಿದ್ದಾರೆ. ಕೆಲ ಸಂಸದರು ಮೋದಿಯವರನ್ನು ಫಾಲೋ ಮಾಡಿದ್ದಾರೆ. ಆದರೆ ಕೆಲ ಸಂಸದರಿಗೆ ಮಾತ್ರ ಅಭಿವೃದ್ಧಿ ಮಾಡಲು ಗ್ರಾಮವೇ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ.

ಮೋದಿ ಪ್ರಧಾನಿಯಾದ ಬಳಿಕ ಊರಲ್ಲದ ಊರಿನಲ್ಲಿ ಹೋಗಿ ಆದರ್ಶ ಗ್ರಾಮ ಯೋಜನೆಗೆ ಹಳ್ಳಿಗಳನ್ನು ಹುಡುಕಿದ್ದಾರೆ. ಅಲ್ಲಿನ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಆದರೆ ನಮ್ಮ ಬಹುತೇಕ ಸಂಸದರು ಗ್ರಾಮಗಳನ್ನು ಹುಡುಕಿದ್ದಾರೆ.ಇನ್ನು ಕೆಲವರು ಆಲಸ್ಯಕ್ಕೆ ಜಾರಿದ್ದರೆ, ಮತ್ತೆ ಕೆಲವರಿಗೆ ಯೋಜನೆಯ ಗೈಡ್‍ಲೈನ್ಸ್ ಅಡ್ಡಿಯಾಗಿವೆಯಂತೆ.

ರಾಜ್ಯದ 23 ಲೋಕಸಭಾ ಸದಸ್ಯರು ಹಾಗು 9 ಮಂದಿ ರಾಜ್ಯಸಭಾ ಸದಸ್ಯರು ಆದರ್ಶ ಸಂಸದರ ಗ್ರಾಮ ಯೋಜನೆಗೆ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

`ನಮ್ಮ ಸಂಸದರು ಮತ್ತು ಆದರ್ಶ ಗ್ರಾಮ’

ಡಿವಿ ಸದಾನಂದ ಗೌಡ (ಬೆಂಗಳೂರು ಉತ್ತರ) ಯಶವಂತಪುರ ವಿಧಾನಸಭಾ ಕ್ಷೇತ್ರದ ಸೋಮನಹಳ್ಳಿ ಗ್ರಾಮ ಪಂಚಾಯತ್‍ನ 3 ಗ್ರಾಮ
ಅನಂತ್ ಕುಮಾರ್ (ಬೆಂಗಳೂರು ದಕ್ಷಿಣ) ಆನೇಕಲ್ ತಾಲೂಕಿನ ರಾಗಿಹಳ್ಳಿ ಗ್ರಾಮ ಪಂಚಾಯತ್‍ನ 9 ಗ್ರಾಮ
ಪಿಸಿ ಮೋಹನ್ (ಬೆಂಗಳೂರು ಕೇಂದ್ರ) ಮಹಾದೇವಪುರ ವಿಧಾನಸಭಾ ಸಭಾ ಕ್ಷೇತ್ರದ ಯರಪ್ಪನ ಹಳ್ಳಿ
ಯಡಿಯೂರಪ್ಪ (ಶಿವಮೊಗ್ಗ) ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ

ಶ್ರೀರಾಮುಲು (ಬಳ್ಳಾರಿ) ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮ
ಸಿದ್ದೇಶ್ವರ್ (ದಾವಣಗೆರೆ) ಜಗಳೂರು ತಾಲೂಕಿನ ಮುಸ್ಟೂರು ಗ್ರಾಮ, ಸಂಸದ್
ಪ್ರಹ್ಲಾದ್ ಜೋಶಿ (ಧಾರವಾಡ) ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮ
ಪ್ರತಾಪ್ ಸಿಂಹ (ಕೊಡಗು-ಮೈಸೂರು) ಹುಣಸೂರು ತಾಲೂಕಿನ ಕರಿಮುದ್ದೇನಹಳ್ಳಿ

ನಳೀನ್ ಕುಮಾರ್ ಕಟೀಲ್ (ಮಂಗಳೂರು) ಸುಳ್ಯ ತಾಲೂಕಿನ ಬಳ್ಪ ಗ್ರಾಮ
ಶಿವಕುಮಾರ್ ಉದಾಸಿ (ಹಾವೇರಿ) ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕಿನ ಯಳವಟ್ಟಿ ಗ್ರಾಮ
ಶೋಭಾ ಕರಂದ್ಲಾಜೆ (ಉಡುಪಿ- ಚಿಕ್ಕಮಗಳೂರು) ಮೂಡಿಗೆರೆ ತಾಲೂಕಿನ ದಾರದಹಳ್ಳಿ
ಭಗವಂತ ಖೂಬಾ (ಬೀದರ್) ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮ

ಅನಂತ ಕುಮಾರ್ ಹೆಗಡೆ (ಉತ್ತರ ಕನ್ನಡ) ಸಿದ್ದಾಪುರ ತಾಲೂಕಿನ ಕಾನಗೋಡ್
ರಮೇಶ್ ಜಿಗಜಿಣಗಿ (ವಿಜಾಪುರ) ಬಿಜಾಪುರ ತಾಲೂಕು ಮಕಣಪುರ್ ಗ್ರಾಮ
ಸುರೇಶ್ ಅಂಗಡಿ (ಬೆಳಗಾವಿ) ಬೆಳಗಾವಿ ತಾಲೂಕಿನ ಮುತ್ನಾಳ್ ಗ್ರಾಮ
ಡಿ.ಕೆ ಸುರೇಶ್ (ಬೆಂಗಳೂರು ಗ್ರಾಮಾಂತರ) ಕುಣಿಗಲ್ ತಾಲೂಕಿನ ಮಡಿಕೆಹಳ್ಳಿ

ಸಿ.ಎಸ್. ಪುಟ್ಟರಾಜು (ಮಂಡ್ಯ) ಪಾಂಡವಪುರ ಕೆರೆತೊಣ್ಣೂರು
ಬಿ.ವಿ. ನಾಯಕ್ (ರಾಯಚೂರು) ರಾಯಚೂರು ತಾಲೂಕು ಜಾಗೀರ ವೆಂಕಟಾಪುರ
ಎಚ್.ಡಿ. ದೇವೇಗೌಡ (ಹಾಸನ) ಹಾಸನ ತಾಲೂಕು ಚನ್ನಂಗಿಹಳ್ಳಿ
ಧ್ರುವನಾರಾಯಣ (ಚಾಮರಾಜನಗರ) ಎಚ್.ಡಿ.ಕೋಟೆ ತಾಲೂಕು ಬಿ.ಬಿ.ಕುಪ್ಪೆ ಗ್ರಾಮಪಂಚಾಯಿತಿ

ಮುದ್ದಹನುಮೇಗೌಡ (ತುಮಕೂರು) ಮಧುಗಿರಿ ತಾಲೂಕಿನ ಚಿಕ್ಕಗಾಳವಟ್ಟ
ಕೆ.ಎಚ್. ಮುನಿಯಪ್ಪ (ಕೋಲಾರ) ಬಂಗಾರಪೇಟೆ ತಾಲೂಕು ಬೆಟ್ಟಕಾಮಧೇನಹಳ್ಳಿ
ಪ್ರಕಾಶ್ ಹುಕ್ಕೇರಿ (ಚಿಕ್ಕೋಡಿ) ಚಿಕ್ಕೋಡಿ ತಾಲೂಕು ಶಿರದವಾಡ

ರಾಜ್ಯಸಭಾ ಸದಸ್ಯರು ಆಯ್ಕೆ ಮಾಡಿಕೊಂಡ ಗ್ರಾಮ

ಕುಪೇಂದ್ರ ರೆಡ್ಡಿ- ಹೊಳೆನರಸೀಪುರ ತಾಲೂಕು ದುದ್ದ ಹೋಬಳಿ ಕಬ್ಳಿ ಗ್ರಾಮ
ಆಸ್ಕರ್ ಫರ್ನಾಂಡೀಸ್ – ಉಡುಪಿ ತಾಲೂಕು ಶಿರೂರು
ಬಿ. ಜಯಶ್ರೀ – ತುಮಕೂರು ತಾಲೂಕು ಹೆಬ್ಬೂರು
ರಾಜೀವ್ ಚಂದ್ರಶೇಖರ್- ಬೆಂಗಳೂರು ದೇವನಹಳ್ಳಿ ಸಮೀಪ ಜಾಲಗಿ ಗ್ರಾಮಪಂಚಾಯಿತಿಯ ಹೆಗ್ಗನಹಳ್ಳಿ
ರಾಜೀವ್‍ಗೌಡ – ಮುಳಬಾಗಲು ತಾಲೂಕು ತಾಯಿಲೂರು
ವೆಂಕಯ್ಯನಾಯ್ಡು- ಆಂಧ್ರದ ವಿಶಾಖಪಟ್ಟಣ ಸಮೀಪ ಚಹಾಪಲ ಉಪ್ಪಾಡ
ಬಸವರಾಜಪಾಟೀಲ್ ಸೇಡಂ- ಸೇಡಂ ತಾಲೂಕಿನ ಕುಕ್ಕುಂದ
ಆಯನೂರು ಮಂಜುನಾಥ- ಶಿವಮೊಗ್ಗ ತಾಲೂಕು ಆಯನೂರು ಸಮೀಪದ ತಮ್ಮಡಿಹಳ್ಳಿ
ಪ್ರಭಾಕರ್ ಕೋರೆ – ಚಿಕ್ಕೋಡಿ ತಾಲೂಕಿನ ಜನವಾಡ

Tags: Politics
Source: Public TV

comments

    Be the first one to write a comment for this news.

leave a comment

The content of this field is kept private and will not be shown publicly.

(required)
(required)
A- A A+