Today: Last Update:

ಮೊಬೈಲ್ ಒನ್ ಸೇವೆ ಪಡೆಯುವುದು ಹೇಗೆ?

Posted by Yeshwant

ಬೆಂಗಳೂರು: 4  ಸಾವಿರಕ್ಕೂ ಹೆಚ್ಚು ಸೇವೆಗಳನ್ನು ಒಂದೇ ಸೂರಿನಡಿ ನೀಡುವ ರಾಜ್ಯ ಸರ್ಕಾರದ ‘ಮೊಬೈಲ್ ಒನ್’ ಸೇವೆ ಇದು ಲೋಕಾರ್ಪಣೆಯಾಗಲಿದೆ. ಸೋಮವಾರ ಮಧ್ಯಾಹ್ನ 2.15ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿಗಳು, 3 ಗಂಟೆಗೆ ಕರ್ನಾಟಕ ಮೊಬೈಲ್ ಒನ್ ಸೇವೆಯ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಪರೀಕ್ಷಾ ಫಲಿತಾಂಶಗಳಿಂದ ಹಿಡಿದು ಮೊಬೈಲ್ ರೀಚಾರ್ಜ್, ಟ್ಯಾಕ್ಸಿ ಬುಕ್ಕಿಂಗ್, ಬಸ್, ರೈಲ್ವೆ, ಕ್ಯಾಬ್ ಬುಕ್ಕಿಂಗ್ ಸೇರಿದಂತೆ ಒಟ್ಟು 4 ಸಾವಿರ ಸೇವೆಗಳು ಈ ಯೋಜನೆಯಿಂದ ಲಭ್ಯ.

ಮೊಬೈಲ್ ಒನ್ ಯೋಜನೆಯಲ್ಲಿ ಏನೇನು ಸೌಲಭ್ಯ ಸಿಗಲಿದೆ?
– ಜನನ, ಮರಣ ಪ್ರಮಾಣ ಪತ್ರ ಸೇರಿದಂತೆ ಹಲವು ಸೇವೆಗಳನ್ನ ಮೊಬೈಲ್ ಮೂಲಕವೇ ಪಡೆಯಬಹುದು
– ಸರ್ಕಾರದ 37 ಇಲಾಖೆಗಳ 637 ಸೇವೆಗಳು ಇನ್ಮುಂದೆ ಸ್ಮಾರ್ಟ್ ಆಪ್ ಮೊಬೈಲ್ ಮೂಲಕ ಲಭ್ಯ
– ಮನೆ, ನಿವೇಶನಗಳ ಆಸ್ತಿ ತೆರಿಗೆ, ವಿದ್ಯುತ್, ನೀರು, ದೂರವಾಣಿ ಬಿಲ್ ಮೊಬೈಲ್ ಮೂಲಕವೇ ಪಾವತಿ
– ಖಾಸಗಿ ವಲಯದ ಸಾವಿರ ನಾಗರಿಕ ಸೇವೆಗಳನ್ನ ಈ ಯೋಜನೆಯಲ್ಲಿ ನೀಡುವ ಭರವಸೆ.

ಮೊಬೈಲ್ ಒನ್ ಸೇವೆ ಪಡೆಯುವುದು ಹೇಗೆ?
– ನಿಮ್ಮ ಬಳಿ ಸಾಮಾನ್ಯ ಮೊಬೈಲ್ ಫೋನ್ ಇದ್ದರೆ 161 ಗೆ ಕರೆ ಮಾಡಿ.
– ಸ್ಮಾರ್ಟ್‍ಫೋನ್ ಇದ್ದರೆ 1800 4254 25425 ಗೆ ಮಿಸ್ಡ್‍ಕಾಲ್ ಕೊಡಿ, ನಿಮ್ಮ ಸ್ಕ್ರೀನ್ ಮೇಲೆ ಬರೋ ಲಿಂಕ್ ಕ್ಲಿಕ್ ಮಾಡಿ, ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಸೇವೆ ಪಡೆಯಬಹುದು.
– ಆ್ಯಂಡ್ರಾಯ್ಡ್ ಫೋನ್ ಇದ್ದರೆ ಗೂಗಲ್ ಪ್ಲೇಸ್ಟೋರ್‍ನಲ್ಲಿ ಕರ್ನಾಟಕ ಮೊಬೈಲ್ ಒನ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
– ಐಫೋನ್ ಇದ್ದವರು ಐಒಎಸ್ ಆಪ್ ಡೌನ್‍ಲೋಡ್ ಮಾಡುವ ಮೂಲಕ ಸೇವೆ ಪಡೆಯಬಹುದು.

Tags:
Source: Public TV

comments

    Be the first one to write a comment for this news.

leave a comment

The content of this field is kept private and will not be shown publicly.

(required)
(required)
A- A A+