Today: Last Update:

ಮಂಗಳ ಗ್ರಹದಲ್ಲಿ ಮಾನವರ ಕಂಡ ಅಮೆರಿಕ ಮಹಿಳೆ!

Posted by Yeshwant

ನ್ಯೂಯಾರ್ಕ್‌: ಮಂಗಳ ಗ್ರಹದಲ್ಲಿ ಮಾನವರು ವಾಸಿಸಬಹುದೇ ಎಂಬುದರ ಬಗ್ಗೆ ಅಧ್ಯಯನ ನಡೆಸಲು ವಿಶ್ವದ ವಿವಿಧ ದೇಶಗಳು ಒಂದಾದ ಮೇಲೊಂದರಂತೆ ಸಂಶೋಧನೆ ನಡೆಸುತ್ತಿರುವಾಗಲೇ, 'ಮಂಗಳ ಗ್ರಹದಲ್ಲಿ ಮನುಷ್ಯರಿದ್ದಾರೆ. ಅವರನ್ನು 1979ರಲ್ಲೇ ನಾನು ನೋಡಿದ್ದೇನೆ' ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಮಾಜಿ ಉದ್ಯೋಗಿ ಎಂದು ಹೇಳಿಕೊಂಡ ಮಹಿಳೆಯೊಬ್ಬಳು ತಿಳಿಸಿದ್ದಾಳೆ. ಆದರೆ ಇದು ಸತ್ಯವೋ, ಸುಳ್ಳೋ ಎಂಬುದು ಖಚಿತಪಟ್ಟಿಲ್ಲ.

ಕೋಸ್ಟ್‌ ಟು ಕೋಸ್ಟ್‌ ಎಎಂ ರೇಡಿಯೋ ಸ್ಟೇಷನ್‌ಗೆ 'ಜಾಕಿ' ಎಂಬ ಹೆಸರಿನಲ್ಲಿ ದೂರವಾಣಿ ಕರೆ ಮಾಡಿರುವ ಈ ಮಹಿಳೆ, 1979ರಲ್ಲಿ ಅಮೆರಿಕದ ವೈಕಿಂಗ್‌ ಬಾಹ್ಯಾಕಾಶ ನೌಕೆ ಮಂಗಳ ಗ್ರಹದಲ್ಲಿ ಇದ್ದಾಗ ಅದರ ಸನಿಹಕ್ಕೆ ಇಬ್ಬರು ವ್ಯಕ್ತಿಗಳು ಬಂದಿದ್ದರು ಎಂದು ಹೇಳಿದ್ದಾಳೆ.

1979ರಲ್ಲಿ ವೈಕಿಂಗ್‌ ನೌಕೆಯ ಡೌನ್‌ಲಿಂಗ್‌ ಟೆಲಿಮೆಟ್ರಿ ನಿರ್ವಹಣೆಯನ್ನು ನಾನು ಮಾಡುತ್ತಿದ್ದೆ. ಬಾಹ್ಯಾಕಾಶ ನೌಕೆ ಮಂಗಳ ಗ್ರಹದಲ್ಲಿ ಸುತ್ತುತ್ತಿದ್ದಾಗ ಅದರ ಬಳಿಗೆ ಬಾಹ್ಯಾಕಾಶ ದಿರಿಸು ಧರಿಸಿದ್ದ ಇಬ್ಬರು ವ್ಯಕ್ತಿಗಳು ಬಂದಿದ್ದರು. ಭೂಮಿ ಮೇಲಿನ ವಿಜ್ಞಾನಿಗಳು ಬಳಸುವ ಬಾಹ್ಯಾಕಾಶ ದಿರಿಸಿನಷ್ಟು ದಪ್ಪವಾಗಿ ಅದು ಇರಲಿಲ್ಲ. ಆ ಸಂದರ್ಭದಲ್ಲಿ ನಾವು ಅರ್ಧ ಡಜನ್‌ನಷ್ಟು ಜನ ಇದ್ದೆವು. ಆಗ ವೀಡಿಯೋ ಪ್ರಸಾರ ಸ್ಥಗಿತಗೊಂಡಿತು ಎಂದು ತಿಳಿಸಿದ್ದಾಳೆ. ಈಕೆಯ ಹೇಳಿಕೆಯ ಕುರಿತು ನಾಸಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

1975ರಲ್ಲಿ ವೈಕಿಂಗ್‌ ಹಾಗೂ ವೈಕಿಂಗ್‌ 2 ಎಂಬ ಹೆಸರಿನ ನೌಕೆಗಳನ್ನು ಮಂಗಳ ಗ್ರಹಕ್ಕೆ ನಾಸಾ ಕಳುಹಿಸಿತ್ತು. ಮಂಗಳ ಗ್ರಹದಿಂದ ಫೋಟೋ ತೆಗೆದು ಭೂಮಿ ರವಾನಿಸಿದ ಮೊದಲ ನೌಕೆ ಎಂಬ ದಾಖಲೆ ವೈಕಿಂಗ್‌ ಹೆಸರಲ್ಲಿದೆ.

Tags:
Source: udayavani

comments

    Be the first one to write a comment for this news.

leave a comment

The content of this field is kept private and will not be shown publicly.

(required)
(required)
A- A A+